ಅಭಿಪ್ರಾಯ / ಸಲಹೆಗಳು
Grivience ಕುಂದುಕೊರತೆ

ಸಂಸ್ಥೆ ಬಗ್ಗೆ

ಸಂಸ್ಥೆ ಬಗ್ಗೆ 

ಉತ್ತರ ಕರ್ನಾಟಕ ಭಾಗದ ಜನತೆಗೆ ದಕ್ಷ ಉತ್ತಮ, ಸುರಕ್ಷಿತ, ವಿಶ್ವಾಸಾರ್ಹ ಹಾಗೂ ಮಿತವ್ಯಯಸಾರಿಗೆ ಸೌಲಭ್ಯವನ್ನು ಒದಗಿಸುವ ಮೂಲ ಉದ್ದೇಶದಿಂದ ದಿ : 01-11-1997 ಕರ್ನಾಟಕ ರಾಜ್ಯೋತ್ಸವದಂದು ಮಾತೃ ಸಂಸ್ಥೆಯಾದ ಕರಾರಸಾಸಂಸ್ಥೆಯಿಂದ ವಿಭಜನೆಗೊಂಡು ರಸ್ತೆ ಸಾರಿಗೆ ಸಂಸ್ಥೆ ಕಾಯ್ದೆ 1950 ರಡಿಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಸ್ಥಾಪನೆಗೊಂಡಿತು. ಸಂಸ್ಥೆಯ ವ್ಯಾಪ್ತಿಯಲ್ಲಿ ಬೆಳಗಾವಿ, ಧಾರವಾಡ, ಉತ್ತರ ಕನ್ನಡ, ಬಾಗಲಕೋಟೆ, ಗದಗ & ಹಾವೇರಿ ಜಿಲ್ಲೆಗಳಿರುತ್ತವೆ.

ಸಂಸ್ಥೆಯ ವ್ಯ್ಯಾಪ್ತಿಯು ಸಂಪೂರ್ಣ ಕಂದಾಯ ಜಿಲ್ಲೆಗಳಿಂದ ಕೂಡಿದ್ದು, ಸಂಸ್ಥೆಯ ವ್ಯಾಪ್ತಿಯ ಎಲ್ಲಾ ಸಂಚಾರ ಯೋಗ್ಯ ರಸ್ತೆಗಳಿರುವ ಹಳ್ಳಿಗಳಿಗೆ ಸಾರಿಗೆ ಸೌಲಭ್ಯವನ್ನು ಒದಗಿಸಲಾಗಿದೆ.

ಸಂಸ್ಥೆಯ ಕೇಂದ್ರ ಕಛೇರಿಯು ಹುಬ್ಬಳ್ಳಿಯಲ್ಲಿದ್ದು, ಸಂಸ್ಥೆಯ ಅಡಳಿತ ವ್ಯಾಪ್ತಿಯಲ್ಲಿ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಶಿರ್ಸಿ, ಬಾಗಲಕೋಟೆ, ಗದಗ, ಚಿಕ್ಕೋಡಿ, ಹಾವೇರಿಗಳಲ್ಲಿ ಒಟ್ಟು 8 ವಿಭಾಗೀಯ ಕಛೇರಿಗಳನ್ನು, 48 ಘಟಕಗಳನ್ನು ,ಹುಬ್ಬಳ್ಳಿಯಲ್ಲಿ ಒಂದು ಪ್ರಾದೇಶಿಕ ಕಾರ್ಯಾಗಾರ ಮತ್ತು ಒಂದು ಪ್ರಾದೇಶಿಕ ತರಬೇತಿ ಕೇಂದ್ರವನ್ನು ಹೊಂದಿದೆ. 

ಕಾರ್ಯಾಚರಣೆ ವಿವರ :

ಸಂಸ್ಥೆಯು ಪ್ರತಿ ದಿನ 4716 ವಾಹನಗಳಿಂದ 4440 ಅನುಸೂಚಿಗಳನ್ನು ಕಾರ್ಯಾಚರಣೆ ಮಾಡುತ್ತದೆ.
ಸಂಸ್ಥೆಯು ಪ್ರತಿ ದಿನ 15.50 ಲಕ್ಷ ಕಿ.ಮೀ. ಕ್ರಮಿಸಿ, 22.00 ಲಕ್ಷ ಪ್ರಯಾಣಿಕರನ್ನು ಕೊಂಡೊಯ್ಯುತ್ತದೆ.  
ಸಂಸ್ಥೆಯ ವ್ಯಾಪ್ತಿಯಲ್ಲಿ 6 ಕಂದಾಯ ಜಿಲ್ಲೆಗಳು, 44 ತಾಲ್ಲೂಕುಗಳು ಹಾಗೂ 4596 ಹಳ್ಳಿಗಳಿರುತ್ತವೆ.  4596 ಹಳ್ಳಿಗಳ ಪೈಕಿ 4428 ಹಳ್ಳಿಗಳಿಗೆ ಸಂಚಾರ ಸೌಲಭ್ಯ ಕಲ್ಪಿಸಲಾಗಿದೆ.  
ಸಂಸ್ಥೆಯು ಪ್ರತಿ ದಿನ 546 ನಗರ & ಉಪನಗರ, 1730 ಸಾಮಾನ್ಯ, 2028 ವೇಗದೂತ, 84 ಎಕ್ಸಿಕ್ಯೂಟೀವ್ ರಾಜಹಂಸ, 6 ಮೇಘದೂತ (ಹವಾನಿಯಂತ್ರಿತ), 24 ವೋಲ್ವೋ (ಹವಾನಿಯಂತ್ರಿತ),  ಹಾಗೂ 22 ಸ್ಲೀಪರ್ ಕೋಚ್ (ಹವಾನಿಯಂತ್ರಿತ) ಸೇವೆಗಳನ್ನು ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಗೆ ಕಾರ್ಯಾಚರಣೆ ಮಾಡಲಾಗುತ್ತದೆ.  
ಸಂಸ್ಥೆಯ ವ್ಯಾಪ್ತಿಯಲ್ಲಿ 158 ಬಸ್ ನಿಲ್ದಾಣಗಳಿವೆ.
ಸಂಸ್ಥೆಯಲ್ಲಿ ವಿವಿಧ ದರ್ಜೆಯ ಹುದ್ದೆಗಳಾದ ಅಧಿಕಾರಿಗಳು, ಮೇಲ್ವಿಚಾರಕ ಸಿಬ್ಬಂದಿಗಳು, ಆಡಳಿತ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ ಹಾಗೂ ಚಾಲನಾ ಸಿಬ್ಬಂದಿ ಹುದ್ದೆಗಳಲ್ಲಿ ಒಟ್ಟು 22262 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

 
ರಾಷ್ಟ್ರಮಟ್ಟದ ಪ್ರಶಸ್ತಿಗಳು :

 1. 1998-99 ನೇ ಸಾಲಿನ “ರಸ್ತೆ ಸುರಕ್ಷಾ” ಪಾರಿತೋಷಕ.

 2. 2000-01 ನೇ ಸಾಲಿಗೆ ಕನಿಷ್ಠ ಕಾರ್ಯಾಚರಣೆ ವೆಚ್ಚ ಮಾಡಿದ್ದಕ್ಕಾಗಿ ಭೂ ಸಾರಿಗೆ ಸಚಿವಾಲಯದ ಪಾರಿತೋಷಕ.

 3. 2001-02 ನೇ ಸಾಲಿಗೆ ಅಪಘಾತಗಳ ಪ್ರಮಾಣ ಕಡಿಮೆ ಮಾಡಿದ್ದಕ್ಕಾಗಿ ನಗದು ಬಹುಮಾನ ಮತ್ತು ಪಾರಿತೋಷಕ (ಎರಡನೇ ಸ್ಥಾನ). 
  2002-03 ನೇ ಸಾಲಿಗೆ ಅಪಘಾತಗಳ ಪ್ರಮಾಣ ಕಡಿಮೆ ಮಾಡಿದ್ದಕ್ಕಾಗಿ ನಗದು ಬಹುಮಾನ ಹಾಗೂ ಪಾರಿತೋಷಕ (ಎರಡನೇ ಸ್ಥಾನ). 

 4. 2002-03 ನೇ ಸಾಲಿಗೆ ಕೆ.ಎಂ.ಪಿ.ಎಲ್. ಪ್ರಗತಿಗಾಗಿ ರನ್ನರ ಅಪ್ ಪಾರಿತೋಷಕ. 

 5. ಟೈರುಗಳ ಜೀವಮಾನದಲ್ಲಿ 2002-03 ನೇ ಸಾಲಿನಗಿಂತ 2003-04 ರಲ್ಲಿ ಗ್ರಾಮಾಂತರ ಸಾರಿಗೆಯಲ್ಲಿ ಅತೀ ಹೆಚ್ಚಿನ ಸಾಧನೆ ಮಾಡಿರುವ ಬಗ್ಗೆ ಭಾರತದಲ್ಲೇ ಎರಡನೇ ಸ್ಥಾನಕ್ಕೆ ಆಯ್ಕೆಯಾಗಿರುವುದು.

 6. 2003-04 ನೇ ಸಾಲಿನ ಕೆ.ಎಂ.ಪಿ.ಎಲ್. ಪ್ರಗತಿಗಾಗಿ ರನ್ನರ್ ಅಪ್ ಪಾರಿತೋಷಕ.  

 7. ಕೆ.ಎಂ.ಪಿ.ಎಲ್. ನಲ್ಲಿ 2003-04ರಲ್ಲಿ ಗ್ರಾಮಾಂತರ ಸಾರಿಗೆಯಲ್ಲಿ ಅತೀ ಹೆಚ್ಚಿನ ಸಾಧನೆ ಮಾಡಿರುವ ಬಗ್ಗೆ ಭಾರತದಲ್ಲೇ ಮೊದಲನೇ ಸ್ಥಾನ.

 8. ಕೆ.ಎಂ.ಪಿ.ಎಲ್. ನಲ್ಲಿ 2003-04ರಲ್ಲಿ ಗ್ರಾಮಾಂತರ ಸಾರಿಗೆಯಲ್ಲಿ ಅತೀ ಹೆಚ್ಚಿನ ಸಾಧನೆ ಮಾಡಿರುವ ಬಗ್ಗೆ ಭಾರತದಲ್ಲೇ ಮೊದಲನೇ ಸ್ಥಾನಕ್ಕೆ ಆಯ್ಕೆಯಾಗಿರುವುದು.

 9. ರಾಷ್ಟ್ರಮಟ್ಟದ “ಇಂಡಿಯಾ ಬಸ್ ಅವಾರ್ಡ2015”.

 10. ಉತ್ಕೃಷ್ಟ  ನಗರ ಸಾರಿಗೆ ಸೇವೆಗಾಗಿ ವಾಕರಸಾಸಂಸ್ಥೆಗೆ ರಾಷ್ಟ್ರಮಟ್ಟದ ಅರ್ಬನ್ ಮೊಬಿಲಿಟಿ ಅವಾರ್ಡ-2016.

 11. ಸ್ಕಾಚ್ ಮೊಬಿಲಿಟಿ ಅವಾರ್ಡ-2016.

 12. PSU ಅವಾರ್ಡ್ -2016 ರ ಪುರಸ್ಕಾರ.

 13. ಗ್ರೀನ್ ಟೆಕ್ ಪ್ರಶಸ್ತಿ ಪುರಸ್ಕಾರ-2016.

 14. 1st Annual Exceed Award 2017 ರ ಪುರಸ್ಕಾರ.

 15. ಸ್ಕಾಚ್ ಆರ್ಡರ್ ಆಫ್ ಮೆರಿಟ್ ಪುರಸ್ಕಾರ-2017. (ತಂತ್ರಾಂಶ ಆಧಾರಿತ ರಜೆ ಅರ್ಜಿ ನಿರ್ವಹಣಾ ವ್ಯವಸ್ಥೆ).

 16. ಸ್ಕಾಚ್ ಆರ್ಡರ್ ಆಫ್ ಮೆರಿಟ್ ಪುರಸ್ಕಾರ-2017. (ಮೊದಲು ಸುರಕ್ಷತೆ).

ಇತ್ತೀಚಿನ ನವೀಕರಣ​ : 20-02-2020 05:15 PM ಅನುಮೋದಕರು: csm


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ