ಕಾರ್ಮಿಕ ಕಲ್ಯಾಣ

ಕಾರ್ಮಿಕ ಮತ್ತು ಕಲ್ಯಾಣ ಇಲಾಖೆ

  

ಸಂಸ್ಥೆಯಲ್ಲಿ ಕಾರ್ಮಿಕರ ಕಲ್ಯಾಣಾಕ್ಕಾಗಿ ಈ ಕೆಳಗಿನಂತೆ ಕಲ್ಯಾಣ ಇಲಾಖೆಯಿಂದ ನೌಕರರಿಗೆ ಒದಗಿಸಲಾದ ಸೌಲಭ್ಯಗಳನ್ನು 
ಈ ಕೆಗಿನಂತೆ ವಿವರಿಸಲಾಗಿದೆ. :

  • ಕೇಂದ್ರ ಸ್ಥಾನ ಹುಬ್ಬಳ್ಳಿಯಲ್ಲಿ ನೌಕರರು ಹಾಗೂ ಅವರ ಅವಲಂಬಿತರಿಗಾಗಿ ಸಂಸ್ಥೆಯ ಆಸ್ಪತ್ರೆಯನ್ನು ಹೊಂದಿದೆ ಹಾಗೂ ನಿಗಮದ ಎಲ್ಲಾ ಘಟಕಗಳಲ್ಲಿ ಗೌರವ ಸಂಭಾವನೆಯ ಆಧಾರದ ಮೇಲೆ ಗೌರವ ವೈದ್ಯಕೀಯ ಸಲಹೆಗಾರರನ್ನು ನಿಯೋಜಿಸಲಾಗಿದೆ.
  • ಸಂಸ್ಥೆಯಲ್ಲಿ ನೌಕರರು ಹಾಗೂ ಅವರ ಅವಲಂಬಿತರು ಗಂಭೀರ ಸ್ವರೂಪದ ಖಾಯಿಲೆಗಳಾದ ಬ್ರೇನ್ ಹ್ಯಾಮರೇಜ್, ಕ್ಯಾನ್ಸರ್, ಹೃದಯ ಖಾಯಿಲೆ, ಕಿಡ್ನಿ ಟ್ರಾನ್ಸಲಾಂಟೇಶನ್, ಯಕೃತ್ತು ಮೊದಲಾದ ಖಾಯಿಲೆಯ ಶಸ್ತ್ರ ಚಿಕಿತ್ಸೆಗೆ ವೈದ್ಯಕೀಯ ಮುಂಗಡ ನೀಡಲಾಗುತ್ತದೆ.
  • ಸಂಸ್ಥೆಯ ನೌಕರರು ಮತ್ತು ಅವರ ಅವಲಂಬಿತರಿಗೆ ಉತ್ತಮ ಚಿಕಿತ್ಸೆ ದೊರಕಿಸಿಕೊಡುವ ಹಿನ್ನಲೆಯಲ್ಲಿ ಕರ್ನಾಟಕದ ಸುಸಜ್ಜಿತ ಖಾಸಗಿ ಆಸ್ಪತ್ರೆಗಳಿಗೆ ಸಂಸ್ಥೆಯ ವತಿಯಿಂದ ಮಾನ್ಯತೆ ನೀಡಲಾಗಿದೆ.
  • ಸಂಸ್ಥೆಯಲ್ಲಿನ ಮದ್ಯವ್ಯಸನಿ ನೌಕರರ ದುಶ್ಚಟವನ್ನು ಬಿಡಿಸಲು ಡಿ-ಎಡಿಕ್ಷನ್ ಪ್ರೋಗ್ರಾಮ್‍ನ್ನು ಸಂಸ್ಥೆಯಲ್ಲಿ   ಜಾರಿಗೊಳಿಸಲಾಗಿದೆ.
  • ಸಂಸ್ಥೆಯ ನೌಕರರು ವಾಸಿಸಲು ಮನೆ ಕೊಳ್ಳಲು/ಕಟ್ಟಲು ಪಡೆಯುವ ಗೃಹ ಸಾಲದ ಮೇಲೆ ಬಡ್ಡಿ ಸಹಾಯಧನ ನೀಡುವ ಯೋಜನೆ ಜಾರಿಯಲ್ಲಿದೆ.
  • ನೌಕರರ ಮಕ್ಕಳನ್ನು ಉತ್ತೇಜಿಸಲು ಶೈಕ್ಷಣಿಕ ನಗದು ಪುರಸ್ಕಾರ ನೀÀಡಲಾಗುತ್ತಿದೆ.
  • ನೌಕರರನ್ನು ಪ್ರೋತ್ಸಾಹಿಸಲು ಪ್ರೋತ್ಸಾಹದನ ನೀಡುವ ಪದ್ದತಿ ಅಳವಡಿಸಿಕೊಳ್ಳಲಾಗಿದೆ.
  • ಘಟಕ ಮಟ್ಟದಲ್ಲಿ ನೌಕರರ ವಿಶ್ರಾಂತಿಗಾಗಿ ಸಿಬ್ಬಂದಿ ವಿಶ್ರಾಂತಿ ಗೃಹಗಳನ್ನು ನಿರ್ಮಿಸಲಾಗಿದೆ.
  • ನೌಕರರ ಕುಂದು ಕೊರತೆಗಳ​ನ್ನು ಆಲಿಸಿ ಇತ್ಯರ್ಥಪಡಿಸಲು ನಿಯಮಿತವಾಗಿ ಘಟಕ ಮತ್ತು ವಿಭಾಗ ಮಟ್ಟದಲ್ಲಿ ಕುಂದುಕೊರತೆ ಸಭೆಗಳನ್ನು ನಡೆಸಲಾಗುತ್ತಿದೆ.
  • ಸಂಸ್ಥೆಯ ಸೇವೆಯಲ್ಲಿದ್ದಾ ನೌಕರರು ಅಕಾಲಿಕವಾಗಿ ಮರಣಹೊಂದಿದರೆ ಅವರ ಅಂತ್ಯ ಕ್ರಿಯೆಯ ವೆಚ್ಚಕ್ಕಾಗಿ (ಎಕ್ಸ್-ಗ್ರೇಷಿಯಾ) ಧನ ಸಹಾಯ ಹಾಗೂ ಮೃತ ದೇಹವನ್ನು ಅವರ ಸ್ವಗ್ರಾಮಕ್ಕೆ ತಲುಪಿಸಲು ವಾಹನ ಸೌಕರ್ಯ ಕಲ್ಪಿಸಲಾಗುವುದು.
  • ಕಾರ್ಮಿಕರಿಗೆ ಹಬ್ಬಗಳ ಆಚರಣೆಗಾಗಿ ರೂ.2000/- ಮೊತ್ತದ ಮುಂಗಡ ಕೊಡುವ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ.
  • ಅಪಘಾತ ರಹಿತ ಚಾಲಕರಿಗೆ ಬಂಗಾರದ ಪದಕ ಮತ್ತು ಬೆಳ್ಳಿ ಪದಕಗಳನ್ನು ವಿತರಿಸಲಾಗುವುದು.
  • ಸಂಸ್ಥೆಯಲ್ಲಿನ ಶ್ಲ್ಯಾಘನೀಯ ಸೇವೆಗಾಗಿ ಪ್ರಶಂಸನಾ ಪತ್ರ ಮತ್ತು ನಗದು ಬಹುಮಾನ ಹಾಗೂ ಉತ್ತಮ ಕೆ.ಎಂ.ಪಿ.ಎಲ್. ತರುವ ಚಾಲಕರಿಗೆ ನಗದು ಬಹುಮಾನ ನೀಡುವ ಪದ್ದತಿ ರೂಡಿಸಿಕೊಳ್ಳಲಾಗಿದೆ.
  • ಮಹಿಳಾ ನೌಕರರ ಕುಂದುಕೊರತೆಗಳನ್ನು ಆಲಿಸಲು ಮಹಿಳಾ ಕುಂದುಕೊರತೆಗಳನ್ನು ಆಲಿಸುವ ಸಮಿತಿಯನ್ನು ರಚಿಸಲಾಗಿದೆ.
  • ಸಂಸ್ಥೆಯ ಸೇವೆಯಲ್ಲಿ ಅಪಘಾತ ಸಂಭವಿಸುವುದರಿಂದ ಉಂಟಾದ ಗಾಯಗಳಿಗೆ ಚಿಕಿತ್ಸೆ ಕೊಡಿಸುವ, ಚಿಕಿತ್ಸಾ ವೆಚ್ಚ ಮರುಪಾವತಿಸುವ, ಹಾಗೂ ಚಿಕಿತ್ಸಾ ಅವಧಿಯನ್ನು ಕರ್ತವ್ಯ ನಿಮಿತ್ತ ಹಾಜರಾತಿ ಎಂದು ಪರಿಗಣಿಸುವ ಪದ್ದತಿ ಜಾರಿಯಲ್ಲಿದೆ.
  • ಎರಡು ಮಕ್ಕಳಿಗೆ ಸಿಮೀತಗೊಳಿಸಿದ ಕುಟುಂಬದ ನೌಕರರಿಗೆ ಪ್ರೋತ್ಸಾಹದನ ನೀಡುವ ಯೋಜನೆ. 
  • ಮಹಿಳಾ ನೌಕರರಿಗೆ ಮಗು ಪೋಷಣಾ ಭತ್ಯೆಯನ್ನು ಮಗುವಿಗೆ 3 ವರ್ಷಗಳಿಗೆ ವಿಸ್ತರಿಸಲಾಗಿದೆ.
  • ಕ್ರೀಡಾ ಮತ್ತು ಕಲಾ ಚಟುವಟಿಕೆಗಳಲ್ಲಿ  ನೌಕರರನ್ನು ಪ್ರೋತ್ಸಾಹಿಸಲು ಕ್ರೀಡಾ ಮತ್ತು ಸಾಂಸ್ಕೃತಿಕ​ ಸ್ಪರ್ಧೆಗಳನ್ನು ಆಯೋಜಿಸುವುದು.
  • ಕೈಗಾರಿಕಾ ಒಪ್ಪಂದದನ್ವಯ ನೌಕರರು ಹಾಗೂ ಅವರ ಅವಲಂಬಿತರಿಗೆ ವರ್ಷದಲ್ಲಿ ಒಂದು ತಿಂಗಳು ಪ್ರವಾಸ ಕೈಕೊಳ್ಳಲು ಉಚಿತ ಪ್ರಯಾಣದ ಪಾಸ್/ಎಲ್.ಟಿ.ಸಿ. ನೀಡುವ ವ್ಯವಸ್ಥೆ.
  • ಸೇವೆಯಿಂದ ನಿವೃತ್ತರಾಗುವ ನೌಕರರಿಗೆ ನಿವೃತ್ತ ನಂತರ ಸೌಲಭ್ಯಗಳಾದ ಉಪದಾನ, ಭವಿಷ್ಯ ನಿಧಿ, ಗಳಿಕೆ ರಜೆ ನಗದೀಕರಣ, ಮರಣ-ವ-ನಿವೃತ್ತ ನಿಧಿ ಸೌಲಬ್ಯ
  • ನೌಕರರ ಅಕಾಲಿಕ ನಿಧನಾನಂತರ ಅವರ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡುವುದು.
  • ನೌಕರರು ಅಪಘಾತ ಪ್ರಕರಣ ಅಥವಾ ಸಂಸ್ಥೆಯ ಇನ್ನಾವುದೇ ಕಾನೂನು ಪ್ರಕರಣಗಳನ್ನು ಎದುರಿಸಲು ಕಾನೂನು ಸಹಾಯ ಧನ ನೀಡುವುದು
  • ಕಾರ್ಮಿಕರಿಗೆ  ಕುಟುಂಬ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗಿದೆ.
  • ಮಹಿಳಾ ನೌಕರರಿಗೆ ಪ್ರಸೂತಿ ರಜಾ ನಿಯಮಾವಳಿಗಳಂತೆ ಪ್ರಸೂತಿ ರಜೆ ನೀಡಲಾಗುವುದು
  • ನೌಕರರಿಗೆ ಸಹಕಾರಿ ತತ್ವದಡಿಯಲ್ಲಿ ಸಹಕಾರಿ ಉಪಾಹಾರ ಗೃಹದ ವ್ಯವಸ್ಥೆ.

ಇತ್ತೀಚಿನ ನವೀಕರಣ​ : 14-01-2020 01:16 PM ಅನುಮೋದಕರು: csm



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080