ವಾಣಿಜ್ಯ

ವಾಹನಗಳ ಮೇಲೆ ಜಾಹಿರಾತು ಪ್ರದರ್ಶಿಸಲು ವಿಧಿಸುವ ದರಗಳು:
ಈ ಸೌಲಭ್ಯಗಳೊಂದಿಗೆ ವಾ.ಕ.ರ.ಸಾ.ಸಂ. ಬಸ್ಸುಗಳ ಮೇಲೆ ಈ ರೀತಿ ಜಾಹಿರಾತು ಪ್ರದರ್ಶಿಸಬಹುದು.

ಕ್ರ.ಸo. ವಿವರ ಕ್ಷೇತ್ರ
1 ಹಿಂಬದಿ 12 ಚದರ ಅಡಿ
2 ಎಡ ಬದಿ 18 ಚದರ ಅಡಿ
3 ಬಲ ಬದಿ 18 ಚದರ ಅಡಿ
4 ಒಳ ಬದಿ 2 ಚದರ ಅಡಿ
ಪ್ಯಾನೆಲ್ ಪ್ರತಿ ಬಸ/ಪ್ರತಿ ತಿಂಗಳಿನ ಮಾಸಿಕ ರೂ.
ಹಿಂಬದಿ 770
ಎಡ/ಬಲ ಬದಿ 1860
ಒಳಬದಿ 450
 • ಮೇಲ್ಕಂಡ ದರಗಳು ಜಾಹಿರಾತನ್ನು ಅಳಿಸುವ ವೆಚ್ಚವನ್ನೊಳಗೊಂಡಿದೆ, ಆದರೆ ಸ್ಥಳೀಯ ಮುನಸಿಪಲ್ ತೆರಿಗೆಗಳನ್ನು ಹೊರತುಪಡಿಸಿದೆ.
 • ಸ್ಥಳೀಯ ತೆರಿಗೆ ಹಾಗೂ ಜಾಹಿರಾತನ್ನು ಜೋಡಿಸುವ ವೆಚ್ಚವನ್ನು ಜಾಹಿರಾತುದಾರರೇ ಭರಿಸಬೇಕಾಗುತ್ತದೆ.
 • ಸೇವಾ ತೆರಿಗೆ ಹಾಗೂ ಸೆಸ್ ವೆಚ್ಚವನ್ನು ಜಾಹಿರಾತುದಾರರೇ ಭರಿಸಬೇಕಾಗುತ್ತದೆ.
 • ಪ್ರದರ್ಶಿಸುವ ಜಾಹಿರಾತು ವೆಚ್ಚವನ್ನು ಮುಂಗಡವಾಗಿ ಡಿಮ್ಯಾಂಡ್ ಡ್ರಾಫ್ಟ ಅಥವಾ ಪೇ ಆರ್ಡರ್ ರೂಪದಲ್ಲಿ ಪಾವ್ತಿಸಬೇಕಾಗುತ್ತದೆ.
 • RTO ತೆರಿಗೆಯನ್ನು ಆರು ತಿಂಗಳಲ್ಲಿ ಒಂದು ಬಾರಿ ಆಕರಿಸಲಾಗುವುದು.
 • ಜಾಹಿರಾತನ್ನು ಕನಿಷ್ಠ ಆರು ತಿಂಗಳು ಅಥವಾ ಗರಿಷ್ಠ ಒಂದು ವರ್ಷ ಅವಧಿಗೆ ನೀ ಡಲಾಗುತ್ತದೆ.
 • ಹೆಚ್ಚಿನ ಪ್ರಮಾಣದಲ್ಲಿ ಜಾಹಿರಾತು ನೀಡುವವರಿಗೆ ಈ ಕೆಳಗಿನಂತೆ ಡಿಸ್ಕೌಂಟ್ ನೀಡಲಾಗುತ್ತದೆ.
 1. 4350 ಚದರ ಅಡಿ. ಪ್ರತಿ ತಿಂಗಳು, ಕನಿಷ್ಟ 6 ತಿಂಗಳ ಅವಧಿ ------ 5%
 2. 8700 ಚದರ ಅಡಿ. ಪ್ರತಿ ತಿಂಗಳು, ಕನಿಷ್ಟ 6 ತಿಂಗಳ ಅವಧಿ ------ 10%
 3. 43500 ಚದರ ಅಡಿ. ಪ್ರತಿ ತಿಂಗಳು, ಕನಿಷ್ಟ 6 ತಿಂಗಳ ಅವಧಿ ------15%
 4. 130000 ಚದರ ಅಡಿ. ಪ್ರತಿ ತಿಂಗಳು, ಕನಿಷ್ಟ 6 ತಿಂಗಳ ಅವಧಿ -----25%
ಕಲ್ಯಾಣ ಕೇಂದ್ರದ (ಕಲ್ಯಾಣ ಮಂಟಪ) ವಿವರಗಳು:

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯಾಪ್ತಿಯಲ್ಲಿ 2 ( 1 ಹುಬ್ಬಳ್ಳಿ 2 ಲಕ್ಷ್ಮೇಶ್ವರದಲ್ಲಿ) ಕಲ್ಯಾಣ ಕೇಂದ್ರಗಳನ್ನು ನಿರ್ಮಿಸಿದ್ದು ಸಂಸ್ಥೆಯ ಸಿಬ್ಬಂದಿಗಳು, ಕಾರ್ಮಿಕರು, ಅಧಿಕಾರಿಗಳಿಗೆ ಅವರ ಮತ್ತು ಅವರ ಕುಟುಂಬದ ಸದಸ್ಯರ ಮಂಗಳ ಕಾರ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ರಿಯಾಯ್ತಿ ದರದಲ್ಲಿ ದಿನದ ಬಾಡಿಗೆ ಆಧಾರದ ಮೇಲೆ ನೀಡಲಾಗುತ್ತಿದೆ. ಸದರಿ ಕಲ್ಯಾಣ ಕೇಂದ್ರಗಳನ್ನು ಸಾರ್ವಜನಿಕರಿಗೂ ಸಹ ದಿನದ ಬಾಡಿಗೆ ಆಧಾರದ ಮೇಲೆ ನೀಡಲಾಗುತ್ತದೆ. ಬಾಡಿಗೆ ದರದ ವಿವರಗಳು ಇಂತಿವೆ:

ಕ್ರ. ಸಂ. ಕಲ್ಯಾಣ ಕೇಂದ್ರಗಳು​ ಸಂಸ್ಥೆಯ  ಅಧಿಕಾರಿಗಳಿಗೆ/ಪ್ರತಿ ದಿನಕ್ಕೆ​ ಸಂಸ್ಥೆಯ ಕಾರ್ಮಿಕರಿಗೆ/ಪ್ರತಿ ದಿನಕ್ಕೆ. ಸಾರ್ವಜನಿಕರಿಗೆ​
1 ಹುಬ್ಬಳ್ಳಿ 18,000/- 12,000/- 30000/-
2 ಲಕ್ಷ್ಮೇಶ್ವರ 5,000/- 4,000/- 9000/-

ಬಾಡಿಗೆಗೆ ನೀಡಲು ಷರತ್ತು/ನಿಬಂಧನೆಗಳು:

 1. ಕಲ್ಯಾಣ ಕೇಂದ್ರದ ಬಾಡಿಗೆಯನ್ನು ದಿನದ  (24 ಗಂಟೆಗಳ) ಲೆಕ್ಕಾಚಾರದಂತೆ ನೀಡಲಾಗುವುದು.
 2. ದಿನದ ಬಾಡಿಗೆಯ ಮೇಲೆ ಸೇವಾ ತೆರಿಗೆ ಹಾಗೂ ವಿಲಾಸಿ ತೆರಿಗೆಯನ್ನು ಬಳಕೆದಾರರು ಭರಿಸಬೇಕು;
 3. ದಿನದ ಬಾಡಿಗೆ ಮೇಲೆ ಶಿಕ್ಷಣ  ಸೆಸ್‍ನ್ನು ಬಳಕೆದಾರರು ಭರಿಸಬೇಕು.
 4. ಹೈಯರ್ ಸೆಕೆಂಡರಿ ಶಿಕ್ಷಣ ಸೆಸ್‍ನ್ನು ಬಳಕೆದಾರರು ಭರಿಸಬೇಕು.
 5. ಭದ್ರತಾ ಠೇವಣಿಯನ್ನು ಮುಂಗಡವಾಗಿ ಬಾಡಿಗೆ ಹಣದೊಂದಿಗೆ ಪಾವತಿಸಬೇಕಾಗುತ್ತದೆ. ಬಿಲ್ ತಯಾರಿಸಿದ ನಂತರ ಉಳಿದ ಹಣವನ್ನು ಮರಳಿಸುವ ಕುರಿತು ಕ್ರಮಕೈಗೊಳ್ಳಲಾಗುವುದು.

ಇತ್ತೀಚಿನ ನವೀಕರಣ​ : 13-01-2020 03:17 PM ಅನುಮೋದಕರು: csm


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080