ಅಭಿಪ್ರಾಯ / ಸಲಹೆಗಳು
Grivience ಕುಂದುಕೊರತೆ

ಅಧ್ಯಕ್ಷರು

ನಿಮ್ಮೊಂದಿಗೆ....

            ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಉತ್ತರ ಕರ್ನಾಟಕದ ಪ್ರಯಾಣಿಕರ ಸಾರಿಗೆ ಸೇತುವೆ ಬಿಂದು ಹಾಗೂ ಜನತೆಯ ಅಚ್ಚುಮೆಚ್ಚಿನ ಸಂಬಂಧವಾಗಿದೆ. ನಾನು ಅಧ್ಯಕ್ಷನಾಗಿ ಈಗ ಒಂದು ವರ್ಷ. ಇದು ಸಾಧನೆ-ಸವಾಲು, ಸಿಹಿಕಹಿಗಳ ಮಿಶ್ರಿತಗಳ ಪರ್ವ. ಸಾರಿಗೆ ಸಂಸ್ಥೆಯು ಪ್ರಾರಂಭದಲ್ಲೇ ವೇಗ ಪಡೆದು ಸಾಧನೆಯ ಪಥದಲ್ಲಿ ದಿಟ್ಟತನದಿಂದ ಸಾಗುತ್ತಿರುವಾಲೇ ದಿಢೀರ್ ಆಗಿ ಸವಾಲೊಡ್ಡಿದ ಕೋವಿಡ್-೧೯ ಪ್ರಗತಿಯ ಪರಿಭ್ರಮಣಕ್ಕೆ ತಡೆ ಒಡ್ಡಿದ್ದು ದುರ್ದೈವ. ಹೊಸ ಹೊಸ ಕಾರ್ಯ ಯೋಜನೆಗಳ ಅನುಷ್ಠಾನದಲ್ಲಿ ಚುರುಕಿನ ಗತಿ ಪಡೆದುಕೊಳ್ಳುತ್ತಿದ್ದಾಗಲೇ ಸಾರಿಗೆ ಕ್ಷೇತ್ರವು ಸೇರಿದಂತೆ ಹಲವು ಕ್ಷೇತ್ರಗಳಿಗೆ ಬಹಳ ತೊಂದರೆಯಾಯಿತು ಮತ್ತು ನಾಲ್ಕಾರು ತಿಂಗಳು ಲಾಕ್‌ಡೌನ್ ಆಗಿ ಜನ ಸಂಚಾರವೇ ದುಸ್ತರವಾಯಿತು. ಇಂತ ಸಂದಿಗ್ಧದಲ್ಲಿ ಲಕ್ಷಾಂತರ ಸಂತ್ರಸ್ತರನ್ನು, ಕಾರ್ಮಿಕರನ್ನು ತಮ್ಮ ನೆಲೆಗಳಿಗೆ ತಲುಪಿಸಲು ಸಮರೋಪಾದಿಯಲ್ಲಿ ಶ್ರಮಿಸಿದ ಸಾರ್ಥಕತೆ ನಮ್ಮ ಸಾರಿಗೆ ಸಂಸ್ಥೆಯದು. ಈ ಸಂದರ್ಭದಲ್ಲಿ ಸಂಸ್ಥೆಗೆ ಅಪಾರ ನಷ್ಠವಾದರೂ ಸಾರ್ವಜನಿಕ ಸೇವೆಯನ್ನೇ ಪರಮ ಧ್ಯೆಯವನ್ನಾಗಿಟ್ಟುಕೊಂಡು ಕೆಲಸ ಮಾಡುವುದು ನಮ್ಮ ಆದ್ಯತೆಯಾಯಿತು. ಕೋವಿಡ್-೧೯ ಒಡ್ಡಿದ ಜೀವಭಯದಲ್ಲೂ ಸೇನಾನಿಗಳಂತೆ ನಿಂತು ದೈರ್ಯದಿಂದ ಕೆಲಸ ಮಾಡಿದ ನಮ್ಮ ಸಾರಿಗೆ ಸಂಸ್ಥೆಯ ಸಮಸ್ತ ಸಿಬ್ಬಂದಿಗಳಿಗೂ ನಾನು ಚಿರಋಣಿ.

            ಸಾರಿಗೆ ಸಂಸ್ಥೆಗಳು ಎಷ್ಟೇ ಕಷ್ಟನಷ್ಟ ಅನುಭವಿಸುತ್ತಿದ್ದರೂ, ಸದಾ ಪ್ರೋತ್ಸಾಹ-ಪ್ರೇರಣೆ ನೀಡುತ್ತಿರುವ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪನವರಿಗೆ ಅನಂತಾನಂತ  ವಂದನೆಗಳು ಹಾಗೂ ಅತೀ ಹೆಚ್ಚು ಮುತುವರ್ಜಿವಹಿಸಿ ನಾಲ್ಕು ಸಾರಿಗೆ ಸಂಸ್ಥೆಗಳ ಏಪ್ರೀಲ್-೨೦ ರಿಂದ ಸೆಪ್ಪಂಬರ-೨೦ರ ವರೆಗೆ ಸಿಬ್ಬಂದಿಗಳ ವೇತನಕ್ಕೆ ಸರ್ಕಾರದಿಂದ ಅನುಧಾನ ಬಿಡುಗಡೆ ಮಾಡಿಸಿದ ಸನ್ಮಾನ್ಯ ಉಪ-ಮುಖ್ಯ ಮಂತ್ರಿಗಳು ಹಾಗೂ ಸಾರಿಗೆ ಸಚಿವರುಗಳಾದ ಶ್ರೀ ಲಕ್ಷ್ಮಣ ಸವದಿ ರವರಿಗೆ ಅನಂತ ವಂದನೆಗಳು. ಈ ಎಲ್ಲಾ ಏರಿಳಿತಗಳ ನಡುವೆಯೂ ಸಾಧನೆಯ ಪಥದಲ್ಲಿ ನಮ್ಮ ಸಾರಿಗೆ ಸಂಸ್ಥೆಯ ಯಶಸ್ಸಿನ ಸವಾರಿಯನ್ನು ಕೊಂಡೊಯ್ಯುವ ಛಲ, ಹಠ ನಮ್ಮಲ್ಲಿ ಕಮ್ಮಿಯಾಗಿಲ್ಲ. ಸಂಸ್ಥೆಯಲ್ಲಿ ಹೊಸತನದ ಸೇವೆ-ಸೌಲಭ್ಯ ನೀಡುವತ್ತ ನಾವು ದಾಪುಗಾಲನ್ನಿಡುತ್ತಿದ್ದೇವೆ. ಕಾರಣ ನಾವೆಲ್ಲರೂ ಸೇರಿ ಹೆಚ್ಚಿನ ಪರಿಶ್ರಮದಿಂದ ಮತ್ತೇ ಮೊದಲಿನಂತೆ ಸಂಸ್ಥೆಯನ್ನು ಮುನ್ನಡೆಸಲು ಪಣತೊಡೋಣ. 

                                                                                                                                             

 

 

                                                                                                                                                   ವಿ.ಎಸ್. ಪಾಟೀಲ 
                                                                                                                                            ಅಧ್ಯಕ್ಷರು,
                                                                                                                                                ವಾ.ಕ.ರ.ಸಾ.ಸಂಸ್ಥೆ, ಕೇಂದ್ರ ಕಚೇರಿ
                                                                                                                                              ಗೋಕುಲ್ ರಸ್ತೆ, ಹುಬ್ಬಳ್ಳಿ- 580030

ಇತ್ತೀಚಿನ ನವೀಕರಣ​ : 05-09-2020 01:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ